ಎಸ್.ಪಿ.ಸಾಂಗ್ಲಿಯಾನ - ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ಕಥೆ ಮತ್ತು ನಿರ್ದೇಶನ ಮಾಡಿದವರು ಪಿ.ನಂಜುಂಡಪ್ಪ. ಇದು ೧೯೮೮ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆದ ಬ್ಲಾಕ್‌ಬಸ್ಟರ್ 'ಸಾಂಗ್ಲಿಯಾನ' ಚಿತ್ರದ ಉತ್ತರ ಭಾಗವಾಗಿದೆ. ಈ ಚಿತ್ರದಲ್ಲಿ ಶಂಕರನಾಗ್, ಭವ್ಯ ಮತ್ತು ಶಿವರಂಜಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. === ಹಾಡುಗಳು === ಟುಟು ಟುಟು ಟೂಟುಟು ನಿನ್ನ ಜೊತೆ ನಾ ಮೇರು ಗಿರಿಯಾಣೆ ನೀಲಿ ಕಡಲಾಣೆ ನೀನು ವಧುವಾದೆ ರಾಮಯ್ಯ ರಾಮಯ್ಯ ನೀ ಮೈಯೆಲ್ಲ ಕಣ್ಣಿದ್ದ ಒಬ್ಬ ಶೂರನೊ === ಪಾತ್ರ === ಶಂಕರನಾಗ್ - ಸಾಂಗ್ಲಿಯಾನ ಭವ್ಯ ಶಿವರಂಜಿನಿ ದೇವರಾಜ್ ಅಶೋಕ್ ಮುಖ್ಯಮಂತ್ರಿ ಚಂದ್ರು ವಜ್ರಮುನಿ ಮಾಸ್ಟರ್ ಮಂಜುನಾಥ್ ಜೈ ಜಗದೀಶ್ ಶಶಿಕುಮಾರ್ ಅವಿನಾಶ್ ಲೋಹಿತಾಶ್ವ ಸುಧೀರ್ ಮೈಸೂರು ಲೋಕೇಶ್ ಸದಾಶಿವ ಬ್ರಹ್ಮಾವರ್ ದಿನೇಶ್